ಆಧ್ಯಾತ್ಮಿಕ ಆಧಿದೈವಿಕ ಆಧಿ ಭೌತಿಕವೆಂಬ
ಮಹಾ ಹ್ರದದಲ್ಲಿ ಕೆಡೆಯದೆ ವಿಷಯಂಗಳೆಂಬ
ಕಂಟಕಂಗಳನು ತುಳಿಯದೆ,
ಅಸೂಯೆ ಎಂಬ ವಿಷ ಲತೆಯನು ಶೋಷಣಂಗೆಯ್ದು
ಅಹಂಕಾರವೆಂಬ ಹ್ರದದಲ್ಲಿ ಮುಳುಗದೆ,
ಸಮಸ್ತ ಉಪದ್ರವಂಗಳನು ಸ್ವ ಆತ್ಮಜ್ಞಾನದಿಂದ ವಿಸರ್ಜಿಸಿ
ತತ್ತ್ವ ಜ್ಞಾನಿಯಾದಾತನೆ ಚರಮೂರ್ತಿಯು
ಶಾಂತವೀರೇಶ್ವರಾ
Transliteration Ādhyātmika ādhidaivika ādhi bhautikavemba
mahā hradadalli keḍeyade viṣayaṅgaḷemba
kaṇṭakaṅgaḷanu tuḷiyade,
asūye emba viṣa lateyanu śōṣaṇaṅgeydu
ahaṅkāravemba hradadalli muḷugade,
samasta upadravaṅgaḷanu sva ātmajñānadinda visarjisi
tattva jñāniyādātane caramūrtiyu
śāntavīrēśvarā