ಗಜಚರ್ಮವೆ ಕಂಥೆ, ಧರಣೆಯೆ ಖಟ್ಯಾಂಗ,
ಅಂಬುಧಿಯೆ ಕಮಂಡಲ, ಸುರಗಿರಿಯೆ ದಂಡ,
ಸತ್ವ ರಜಸ್ತಮವೆ ಕಪ್ಪರ, ಧರ್ಮಾರ್ಥ ಕಾಮ ಮೋಕ್ಷ ರತಿಯೆ ಜೋಳಿಗೆ,
ಪುಣ್ಯ ಪಾಪಂಗಳೆ ಮುರಿಗಳು, ಅಜಾಂಡಂಗಳೆ ಜಂಗು,
ತಂತ್ರ ನಿಕರವೆ ಬಹಿರ್ವಾಸ, ಇತಿಹಾಸವೆ ಕೌಪ,
ಉರಗ ರಾಜನೆ ಕಟಿಸೂತ್ರ, ಪುರಾಣ ಸ್ತೋಮವೆ ಅಂಗದಟ್ಟು,
ಸ್ಮೃತಿಯೆ ಧೋತ್ರ, ಅಷ್ಟಾವರಣವೆ ರುದ್ರಬಂಧ,
ಪಂಚ ಕೃತ್ಯವೆ ಬಗಲ ಜೋಳಿಗೆ,
ಯಮ ಗಮನಂಗಳೆ ಕರ್ಣಕುಂಡಲ,
ವನಸ್ಪತಿಯೆ ಶೃರೀರದ ರೋಮಂಗಳು,
ಷಡಧ್ವವೆ ಚರಣದ ಹೆಜ್ಜೆಗಳು, ಮೇಘವೆ ಜಡೆ,
ಶಾಂತಿಯೆ ಭಸ್ಮ, ಹಸ್ತದಲಿ ಶೂನ್ಯಲಿಂಗವನು ಧರಿಸಿ
ಪ್ರಭುವೆ ಅನಾದಿ ಜಂಗಮವಾಗಿ ಅನಾದಿ
ಭಕ್ತನಾದ ಬಸವೇಶ್ವರನ ಮಂದಿರದಲ್ಲಿ ಭಕ್ತಿಭಿಕ್ಷವ ಬೇಡಿಹನಯ್ಯ
ಶಾಂತವೀರೇಶ್ವರಾ
Transliteration Gajacarmave kanthe, dharaṇeye khaṭyāṅga,
ambudhiye kamaṇḍala, suragiriye daṇḍa,
satva rajastamave kappara, dharmārtha kāma mōkṣa ratiye jōḷige,
puṇya pāpaṅgaḷe murigaḷu, ajāṇḍaṅgaḷe jaṅgu,
tantra nikarave bahirvāsa, itihāsave kaupa,
uraga rājane kaṭisūtra, purāṇa stōmave aṅgadaṭṭu,
smr̥tiye dhōtra, aṣṭāvaraṇave rudrabandha,
pan̄ca kr̥tyave bagala jōḷige,
Yama gamanaṅgaḷe karṇakuṇḍala,
vanaspatiye śr̥rīrada rōmaṅgaḷu,
ṣaḍadhvave caraṇada hejjegaḷu, mēghave jaḍe,
śāntiye bhasma, hastadali śūn'yaliṅgavanu dharisi
prabhuve anādi jaṅgamavāgi anādi
bhaktanāda basavēśvarana mandiradalli bhaktibhikṣava bēḍ'̔ihanayya
śāntavīrēśvarā