•  
  •  
  •  
  •  
Index   ವಚನ - 714    Search  
 
ಪರಜಂಗಮಸ್ಥಲಕ್ಕೆ ಶಿರೋಮಣಿಯಾದ ಪರಿಪೂರ್ಣವಾದಾಚಾರಲಿಂಗ ಸ್ವರೂಪವನು, ಅದರ ಅವಾಂತರ ಸ್ಥಲಭೇದಂಗಳನು, ಲೇಸಾಗಿ ಉಪದೇಶಿಸಿ ಆಮೇಲೆ, ಪರಜಂಗಮವೆ ಮುಖ್ಯವಾದ, ಶರಣ್ಯವಾದುದರಿಂದೆ ಕೃತ್ಯನಾದ ಮಾಹೇಶ್ವರಂಗೆ ಶರಣ್ಯವಾದ ಪರಜಂಗಮವೆ ಗುರುವು. ಆ ಗುರುರೂಪವಾದ ಲಿಂಗಕ್ಕೆ ನವವಿಧ ಸ್ಥಲವಾದುದರಿಂದ ಉಪಾಸತ್ಯತ್ವವನು ಪ್ರತಿಪಾದಿಸುವದಕ್ಕೋಸುಗ ಆ ಗುರುಲಿಂಗಧಾರಿಯಾದ ಮಾಹೇಶ್ವರಂಗೆ ಆಗಮ ಲಿಂಗ ತ್ರಿವಿಧದಿಂದ ಶೀಲಾಚಾರ ನಿಷ್ಠೆ ಮೊದಲಾದುದನು ಮಾಹೇಶ್ವರಸ್ಥಲದಲ್ಲಿ ಪ್ರತಿಪಾದಿತವಾಗಿ ಆಚಾರದ ದೃಢತ್ವದಿಂದವೆ ಲಿಂಗನಿಷ್ಠಾನ್ವಿತತ್ತ್ವವನು ಕಾಯಲಿಂಗವೆಂಬ ಮೂರರ ಅವಗ್ರಹಣವನು ಪೂರ್ವಾಶ್ರಯ ನಿರಸನ ಕಡೆಯಾಗುಳ್ಳ ನಿರಾಸಕತ್ವವು ಆಚಾರಲಿಂಗ ತ್ರಿವಿಧದಿಂದ ಸರ್ವಗತ ನಿರಾಸಕತ್ವವನು ಶೀವಜಗನ್ಮಯತ್ವವನು ಪ್ರತಿಷ್ಠಸಿ ಆ ಲಿಂಗದಲ್ಲಿ ‘ಭಕ್ತದೇಹಿಕಲಿಂಗ’ ವೆಂಬ ನಿಶ್ಚಯವನು ಐಯ್ದಿದ ಒಂಬತ್ತು ಪ್ರಕಾರವಾದ ಗುರುಲಿಂಗದ ವಿಚಾರವು ಮಾಡಲು ತಕ್ಕುದಯ್ಯ ಶಾಂತವೀರೇಶ್ವರಾ
Transliteration Parajaṅgamasthalakke śirōmaṇiyāda paripūrṇavādācāraliṅga svarūpavanu, adara avāntara sthalabhēdaṅgaḷanu, lēsāgi upadēśisi āmēle, parajaṅgamave mukhyavāda, śaraṇyavādudarinde kr̥tyanāda māhēśvaraṅge śaraṇyavāda parajaṅgamave guruvu. Ā gururūpavāda liṅgakke navavidha sthalavādudarinda upāsatyatvavanu pratipādisuvadakkōsuga ā guruliṅgadhāriyāda māhēśvaraṅge āgama liṅga trividhadinda Śīlācāra niṣṭhe modalādudanu māhēśvarasthaladalli pratipāditavāgi ācārada dr̥ḍhatvadindave liṅganiṣṭhānvitattvavanu kāyaliṅgavemba mūrara avagrahaṇavanu pūrvāśraya nirasana kaḍeyāguḷḷa nirāsakatvavu ācāraliṅga trividhadinda sarvagata nirāsakatvavanu śīvajaganmayatvavanu pratiṣṭhasi ā liṅgadalli ‘bhaktadēhikaliṅga’ vemba niścayavanu aiydida ombattu prakāravāda guruliṅgada vicāravu māḍalu takkudayya śāntavīrēśvarā