‘ಅಲ್ಪಕ್ರಿಯಾ ಬಹುಫಲಂ | ವೀರಶೈವಂ ಮಾಹೇಶ್ವರ || ಅನ್ಯಶೈವಂತು
ತತ್ಸರ್ವಂ ಫಲಮಲ್ಪಂ ಕ್ರಿಯಾ ಬಹು’ ಎಂದು,
ಎಲೆ ಮಹಾದೇವಿಯೆ ವೀರಶೈವವು,
ಅಲ್ಪ ಕ್ರಿಯೆಗಳಿಂದವೇ ಬಹಳ ಫಲವುಳ್ಳಂಥಾದು,
ಈ ವೀರಶೈವವಲ್ಲದೆ ಉಳಿದ ಸಮಸ್ತ ಶೈವವು
ಅಲ್ಪ ಫಲವುಳ್ಳದಾಗಿಯೂ ಬಹುಕ್ರಿಯೆಗಳುಳ್ಳುದು. ‘ತಸ್ಮಾರ್ತ್ಸರ್ವಪ್ರಯತ್ನೇನ
ವೀರ ಮಾಹೇಶ್ವರಂ ಶುಭಂ’. ಅದು ಕಾರಣ. ನಾನಾ ಪ್ರಯತ್ನದಿಂದಲೂ
ವೀರಮಾಹೇಶ್ವರವೆ ಸುಲಭವಾದಂಥದು,
ಶಾಂತವೀರೇಶ್ವರಾ
Transliteration ‘Alpakriyā bahuphalaṁ | vīraśaivaṁ māhēśvara || an'yaśaivantu
tatsarvaṁ phalamalpaṁ kriyā bahu’ endu,
ele mahādēviye vīraśaivavu,
alpa kriyegaḷindavē bahaḷa phalavuḷḷanthādu,
ī vīraśaivavallade uḷida samasta śaivavu
alpa phalavuḷḷadāgiyū bahukriyegaḷuḷḷudu. ‘Tasmārtsarvaprayatnēna
vīra māhēśvaraṁ śubhaṁ’. Adu kāraṇa. Nānā prayatnadindalū
vīramāhēśvarave sulabhavādanthadu,
śāntavīrēśvarā