•  
  •  
  •  
  •  
Index   ವಚನ - 86    Search  
 
ಅನಂತರದಲ್ಲಿ ದಾಂತ್ಯಾದಿ ಸಾಧನಸಂಪನ್ನನಾಗಿ, ಶ್ರೀಗುರುವಿಂ ಶಾಸನೀಯನಪ್ಪುದರಿಂ ಶಿಷ್ಯನಾದಾತ್ಮನು ಶುಭಕಾಲದೇಶಾದಿಗಳಂ ಪರೀಕ್ಷಿಸಿ ಬಳಿಕಾಚಾರ್ಯ ಸಂಪ್ರದಾಯಸಿದ್ಧನಾದ ಸಕಲಸದ್ಗುಣಸಹಿತನಾದ ಶ್ರೀಗುರುವನೆಯ್ದಿ, ಮತ್ತಮಾ ಗುರುವಿನನುಮತದಿಂ ಶಿವಪೂಜಾ ಪಾರಾಯಣರಾದ ಕೀರ್ತಿಮಯರಾದ ನಾಲ್ವರು ಋತ್ವಿಕ್ಕುಗಳಂ ಸ್ನಾನಧವಲಾಂಬರ ಆಭರಣ ಪುಷ್ಪಾದಿಗಳಿಂದಲಂಕರಿಸಿ, ಬಳಿಕಾ ಶ್ರೀಗುರುವಿನಾಜ್ಞೆಯಿಂ ತಾನಾ ರಾತ್ರೆಯಲ್ಲಿ, ಕ್ಷೀರಾಹಾರಿಯಾಗಿರ್ದು, ಮೇಲೆ ಪ್ರಭಾತಸಮಯದಲ್ಲಿ ಪೊದೆದು, ಭಸಿತೋದ್ಧೂಳನಂ ರಚಿಸಿ, ತ್ರಿಪುಂಡ್ರ ಧಾರಣಮಂ ವಿಸ್ತರಿಸಿ, ರುದ್ರಾಕ್ಷಮಾಲೆಗಳಂ ಧರಿಸಿ, ಸುವರ್ಣಾಭರಣಾದಿಗಳಿಂ ಸಿಂಗರಂಬಡೆದು, ಬಳಿಕಾಚಾರ್ಯನ ಸಮೀಪಕ್ಕೆ ಬಂದು, ಭಯಭಕ್ತಿಯಿಂದಷ್ಟಮಂತ್ರಪೂರ್ವಕದಿಂ ವಿನಯವಿನಮಿತನಾಗಿ ಸುವರ್ಣ ಪುಷ್ಪಾಗಳಿಂ ವಿತ್ತಾನುಸಾರಮಾಗಿ ಗುರುಪೂಜನಂಗೆಯ್ದು ಮರಳಿ ಗಂಧ ಪುಷ್ಪಾದಿಗಳಿಂ ಋತ್ವಿಕ್ಕುಗಳಂ ಭಜಿಸಿ, ಮೇಲೆ ಶ್ರೀಗುರು ಮುಖ್ಯಸಕಲಮಾಹೇಶ್ವರರಂ ವಂದಿಸಿ ವಿಭೂತಿ ವೀಳೆಯಂಗಳಂ ಸಮರ್ಪಿಸಿ, ಬಳಿಕ ಖನನ ದಹನ ಶೋಧನ ಸಂಪ್ರೋಕ್ಷಣ ಮರ್ದನ ಲೇಪನವೆಂಬ ಷಟ್ಕರ್ಮಗಳಿಂ ಸಾರಣೆ ಕಾರಣೆ ತಳಿರುತೋರಣ ಕುಸುಮತೋರಣ ಸರವಿಸರ ಪಳವಳಿಗೆ ಧೂಪ ಧೂಮ್ನಾದಿಗಳಿಂ ಪರಿಶೋಭೆವಡೆದು, ಮನೋಹರವಾದ ದೀಕ್ಷಾಮಂಟಪದಲ್ಲಿ ಗೋಚರ್ಮ ಮಾತೃಭೂಮಿಯಂ ಚೌಕಮಾಗಿ ಗೋರೋಜನ ಗೋಮಯ ಗೋಮೂತ್ರ ಗೋದಧಿ ಘೃತ ಗೋಕ್ಷೀರಯೆಂಬ ಷಟ್ಸಮ್ಮಾರ್ಜನಂಗೆಯ್ದು, ಬಳಿಕಾ ಚೌಕಮಧ್ಯದಲ್ಲಿ ಪ್ರವಾಳ ಮೌಕ್ತಿಕ ಶುಭ್ರಪಾಷಾಣ ಸುವರ್ಣ ಶ್ವೇತಾಭ್ರಕ ತಂಡುಲಾದಿಗಳ ಚೂರ್ಣಂಗಳಿಂದಷ್ಟದಳಕಮಲಮಂ ರಚಿಸಿ, ಮತ್ತದರಾ ವಿವರ: ಶಂಖ ಚಕ್ರ ಶೂಲ ಡಮರುಗ ಪರುಶ ಘಂಟೆ ಛತ್ರ ಚಾಮರವೃಷಭ ಚರಣಾದಿ ವಿಚಿತ್ರವರ್ಣಕಮಂ ತುಂಬುತ್ತದರ ಮೇಲೆ ಎಳ್ಳು ಜೀರಿಗೆ ಗೋದುವೆ ಅಕ್ಕಿ ಉದ್ದುಗಳೆಂಬ ಪಂಚಧಾನ್ಯವನಾದರೂ ಕೇವಲ ತಂಡುಲವನಾದರೂ ಮೂವತ್ತೆರಡಂಗುಲ ಪ್ರಮಾಣಿನ ಚತುರ್ರಸಮಾಗಿ ಹರಹುತ್ತದರ ಮೇಲೆ ತೀರ್ಥಂಬುಪೂರ್ಣಮಾದ ಸುವರ್ಣಾದಿ ನವೀನ ಪಂಚಕಳಶಂಗಳಂ ಪೂರ್ವದಕ್ಷಿಣ ಪಶ್ಚಿಮು ಉತ್ತರ ಮಧ್ಯ ಕ್ರಮದಂದಾಚಾರ್ಯನೆ ಸ್ಥಾಪಿಸುತ್ತಾ, ಕಳಶಂಗಳಂ ಬೇರೆ ಬೇರೆ ನೂತನ ವಸ್ತ್ರಂಗಳಿಂ ಸುತ್ತಿ, ನವಪಂಚತಂತುಗಳಿಂ ಪರಿವೇಷ್ಟಿಸಿ ಸುವರ್ಣಾದಿನಗಳನವರೊಳಿರಸಿ, ಬಳಿಕ್ಕಾಮ್ರಪಲ್ಲವ ದೂರ್ವಾಂಕುರ ಪೂಗ ಕುಸುಮ ನಾಗವಳಿ ……..(ಇಲ್ಲಿ ಒಂದು ಗರಿ ಕಳೆದುಹೋಗಿದೆ)
Transliteration Anantaradalli dāntyādi sādhanasampannanāgi, śrīguruviṁ śāsanīyanappudariṁ śiṣyanādātmanu śubhakāladēśādigaḷaṁ parīkṣisi baḷikācārya sampradāyasid'dhanāda sakalasadguṇasahitanāda śrīguruvaneydi, mattamā guruvinanumatadiṁ śivapūjā pārāyaṇarāda kīrtimayarāda nālvaru r̥tvikkugaḷaṁ snānadhavalāmbara ābharaṇa puṣpādigaḷindalaṅkarisi, baḷikā śrīguruvinājñeyiṁ tānā rātreyalli, kṣīrāhāriyāgirdu, Mēle prabhātasamayadalli podedu, bhasitōd'dhūḷanaṁ racisi, tripuṇḍra dhāraṇamaṁ vistarisi, rudrākṣamālegaḷaṁ dharisi, suvarṇābharaṇādigaḷiṁ siṅgarambaḍedu, baḷikācāryana samīpakke bandu, bhayabhaktiyindaṣṭamantrapūrvakadiṁ vinayavinamitanāgi suvarṇa puṣpāgaḷiṁ vittānusāramāgi gurupūjanaṅgeydu maraḷi gandha puṣpādigaḷiṁ r̥tvikkugaḷaṁ bhajisi, mēle śrīguru mukhyasakalamāhēśvararaṁ vandisi vibhūti vīḷeyaṅgaḷaṁ samarpisi, baḷika khanana dahana śōdhana samprōkṣaṇa Mardana lēpanavemba ṣaṭkarmagaḷiṁ sāraṇe kāraṇe taḷirutōraṇa kusumatōraṇa saravisara paḷavaḷige dhūpa dhūmnādigaḷiṁ pariśōbhevaḍedu, manōharavāda dīkṣāmaṇṭapadalli gōcarma mātr̥bhūmiyaṁ caukamāgi gōrōjana gōmaya gōmūtra gōdadhi ghr̥ta gōkṣīrayemba ṣaṭsam'mārjanaṅgeydu, baḷikā caukamadhyadalli pravāḷa mauktika śubhrapāṣāṇa suvarṇa śvētābhraka taṇḍulādigaḷa cūrṇaṅgaḷindaṣṭadaḷakamalamaṁ racisi, mattadarā vivara: Śaṅkha cakra śūla ḍamaruga paruśa ghaṇṭe chatra cāmaravr̥ṣabha caraṇādi vicitravarṇakamaṁ tumbuttadara mēle eḷḷu jīrige gōduve akki uddugaḷemba pan̄cadhān'yavanādarū kēvala taṇḍulavanādarū mūvatteraḍaṅgula pramāṇina caturrasamāgi harahuttadara mēle Tīrthambupūrṇamāda suvarṇādi navīna pan̄cakaḷaśaṅgaḷaṁ pūrvadakṣiṇa paścimu uttara madhya kramadandācāryane sthāpisuttā, kaḷaśaṅgaḷaṁ bēre bēre nūtana vastraṅgaḷiṁ sutti, navapan̄catantugaḷiṁ parivēṣṭisi suvarṇādinagaḷanavaroḷirasi, baḷikkāmrapallava dūrvāṅkura pūga kusuma nāgavaḷi……..(Illi ondu gari kaḷeduhōgide)