ಬಸವಣ್ಣ   
  ವಚನ - 16     
 
ಕೊಡೆವಿಡಿಯೆ, ಕುದುರೆಯ ದೃಢವುಳ್ಳ ರಾವುತನೇರಿ, ಕೊಡೆ ಕೋಟಿ! ಶೂರರು ಹನ್ನಿಬ್ಬರಯ್ಯಾ! ಚಂದ್ರಕಾಂತದ ಗಿರಿಯ ಗಜ ಬಂದು ಮೂದಲಿಸೆ ಅರಿದು ಕೊಲುವೊಡೆ ರಿಪುಗಳ ಕಲಿತನವ ನೋಡಾ ! ಆವಿಗೆಯೊಳೊದವಿದ ಪುತ್ಥಳಿಯ ರೂಹಿನಂತೆ ಆಯಿತ್ತು ಕೂಡಲ ಸಂಗಮದೇವಾ, ನಿನ್ನ ಹೆಸರಿಲ್ಲದ ಹೆಸರು !