ಬಸವಣ್ಣ   
  ವಚನ - 25     
 
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯಾ; ಚಂದ್ರ ಕುಂದೆ ಕುಂದುವುದಯ್ಯಾ. ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೆ ? ಅಂಬುಧಿಯ ಮುನಿಯಾಪೋಷಣವ ಕೊಂಬಲ್ಲಿ ಚಂದ್ರಮನಡ್ಡ ಬಂದನೆ? ಆರಿಗಾರೂ ಇಲ್ಲ; ಕೆಟ್ಟವಂಗೆ ಕೆಳೆಯಿಲ್ಲಾ! ಜಗದ ನಂಟ ನೀನೇ, ಅಯ್ಯಾ, ಕೂಡಲ ಸಂಗಮದೇವಾ.