ಬಸವಣ್ಣ   
  ವಚನ - 38     
 
ತನ್ನ ವಿಚಾರಿಸಲೊಲ್ಲದು; ಇದಿರ ವಿಚಾರಿಸಹೋಹುದೀ ಮನವು! ಏನು ಮಾಡುವೆನೀ ಮನವನು? ಎಂತು ಮಾಡುವೆನೀ ಮನವನು ಕೂಡಲ ಸಂಗಮದೇವನ ಶರಣರ ನಚ್ಚದ, ಮಚ್ಚದೆ, ಬೆಂದ ಮನವನು?