ಬಸವಣ್ಣ   
  ವಚನ - 41     
 
ವಚನದ ಹುಸಿ, ನುಸುಳೆಂತು ಮಾಣ್ಬುದೆನ್ನಾ? ಮನದ ಮರ್ಕಟತನವೆಂತು ಮಾಣ್ಬುದೆನ್ನಾ? ಹೃದಯದ ಕಲ್ಮಷವೆಂತು ಮಾಣ್ಬುದೆನ್ನಾ? ಕಾಯವಿಕಾರಕ್ಕೆ ತರಿಸಲುವೋದೆನು ಎನಗಿದು ವಿಧಿಯೆ, ಕೂಡಲ ಸಂಗಮದೇವಾ?