ಬಸವಣ್ಣ   
  ವಚನ - 44     
 
ಮುನಿದೆಯಾದೊಡೆ ಒಮ್ಮೆ ಜರೆದೊಡೆ ಸಾಲದೆ? ಅಕಟಕಟಾ! ಮದನಂಗೆ ಮಾರುಗೊಡುವರೇ? ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ, ಕೂಡಲ ಸಂಗಮದೇವಾ?