ಬಸವಣ್ಣ   
  ವಚನ - 49     
 
ಬಂದ ಯೋನಿಯನರಿದು ಸಲಹೆನ್ನ, ತಂದೆ ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು! ಎನ್ನ ತಂದೆ ಕೂಡಲ ಸಂಗಮದೇವಾ; ಇವ ಮಾಣಿಸು, ನಿಮ್ಮ ಧರ್ಮ!