ಬಸವಣ್ಣ   
  ವಚನ - 53     
 
ಬಡಪಶು ಪಂಕದಲ್ಲಿ ಬಿದ್ದೊಡೆ ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ? ಶಿವ ಶಿವಾ! ಹೋದಹೆ, ಹೋದಹೆನಯ್ಯಾ!! ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ. ಪಶುವಾನು: ಪಶುಪತಿ ನೀನು! ತುಡುಗಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ, ಒಡೆಯ ನಿಮ್ಮ ಬಯ್ಯದಂತೆ ಮಾಡು, ಕೂಡಲ ಸಂಗಮದೇವಾ.

C-514 

  Sat 24 Feb 2024  

 ಪಂಕ= ಕೆಸರು, ರಾಡಿ
  Shivakumar
India