ಬಸವಣ್ಣ   
  ವಚನ - 63     
 
ಹುಟ್ಟೆಂದು ಲೋಕದಲ್ಲಿ ಹುಟ್ಟಿಸಿ, ಇಳಿಯಬಿಟ್ಟೊಡೆ ನಿಮ್ಮ ನಗುವರಯ್ಯಾ. ಶಿವಬಟ್ಟೆಯೊಳೆನ್ನನು ಇರಿಸಯ್ಯಾ, ಹರನೇ, ಹೊಲಬುಗೆಟ್ಟೆನು, ಬಟ್ಟೆಯ ತೋರಯ್ಯಾ! ಹುಯ್ಯಲಿಟ್ಟೆನು: ʼಗಣಂಗಳು ಕೇಳಿರಯ್ಯಾ! ಕೂಡಲ ಸಂಗಮದೇವಯ್ಯನೆನ್ನ ಕಾಡಿಹನಯ್ಯಾ!ʼ