ವ್ರತವ ಮಾಡಿಕೊಂಡಲ್ಲಿ ರತಿಗೆಡದೆ,
ಕ್ಷೇತ್ರವಾಸಂಗಳ ಬೇಡದೆ,
ಪಡಿವರ ಧಾನ್ಯಂಗಳೆಂದು, ಗುಡಿಗಳ ಹೊಕ್ಕು,
ಸರಿಗರತಿಯರಲ್ಲಿ ಅಡುಮೆಯಾಗದೆ
ಭಕ್ತರಲ್ಲಿ ಬೇಡುವಾಗಳೆ ಕೆಟ್ಟಿತ್ತು ವ್ರತ.
ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗಕ್ಕೆ ದೂರ.
Transliteration Vratava māḍikoṇḍalli ratigeḍade,
kṣētravāsaṅgaḷa bēḍade,
paḍivara dhān'yaṅgaḷendu, guḍigaḷa hokku,
sarigaratiyaralli aḍumeyāgade
bhaktaralli bēḍuvāgaḷe keṭṭittu vrata.
Ācārave prāṇavāgippa rāmēśvaraliṅgakke dūra.