ಬಸವಣ್ಣ   
  ವಚನ - 80     
 
ಎನ್ನ ಮನದಲ್ಲಿ ಮತ್ತೊಂದನರಿಯೆನಯ್ಯಾ, 'ಓಂ ನಮಃ ಶಿವಾಯ', 'ಓಂ ನಮಃ ಶಿವಾಯ' ಎನುತಿರ್ದೇನೆ. ಎನಗಿದೇ ಮಂತ್ರ; ಎನಗಿದೇ ಜಪ; ಕೂಡಲಸಂಗಮದೇವಾ, ನೀನೇ ಬಲ್ಲೆ, ಎಲೆ ಲಿಂಗವೇ.