ಬಸವಣ್ಣ   
  ವಚನ - 121     
 
ಎಲವದ ಮರ ಹೂತು ಫಲವಾದ ತೆರನಂತೆ; ಸಿರಿಯಾದರೇನು, ಶಿವಭಕ್ತಿಯಿಲ್ಲದನ್ನಕ್ಕ? ಫಲವಾದರೇನು ಹಾವು ಮೆಕ್ಕೆಯಕಾಯಿ? ಕುಲವಿಲ್ಲದ ರೂಹು ಎಲ್ಲಿದ್ದರೇನು? ಬಚ್ಚಲ ನೀರು ತಿಳಿದಲ್ಲಿ ಫಲವೇನು? ಅವಗುಣಿಗಳ ಮೆಚ್ಚ ಕೂಡಲಸಂಗಮದೇವ.