ಬಸವಣ್ಣ   
  ವಚನ - 136     
 
ದೂಷಕನವನೊಬ್ಬ ದೇಶವ ಕೊಟ್ಟರೆ, ಆಸೆಮಾಡಿಯವನ ಹೊರೆಯಲಿರಬೇಡ. ಮಾದರ ಶಿವಭಕ್ತನಾದರೆ, ಆತನ ಹೊರೆಯಲ್ಲಿ ಭೃತ್ಯನಾಗಿರ್ಪುದು ಕರಲೇಸಯ್ಯಾ. ತೊತ್ತಾಗಿರ್ಪುದು ಕರಲೇಸಯ್ಯಾ. ಕಾಡ ಸೊಪ್ಪ ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.