ಬಸವಣ್ಣ   
  ವಚನ - 140     
 
ಕಟ್ಟಿದಿರಿನಲ್ಲಿ ಶಿವಭಕ್ತನ ಕಂಡು, ದೃಷ್ಟಿಯಾರೆ ಶರಣೆಂದೊಡೆ, ಹುಟ್ಟೇಳು ಜನ್ಮದ ಪಾಪ ಬಿಟ್ಟು ಹಿಂಗುವುದು, ನೋಡಾ; ಮುಟ್ಟಿ ಚರಣಕ್ಕೆರಗಿದೊಡೆ ತನುವೊಪ್ಪದಂತೇ ಅಹುದು, ಪರುಷ ಮುಟ್ಟಿದಂತೆ! ಕರ್ತೃ ಕೂಡಲಸಂಗನ ಶರಣರ ಸಂಗವು ಮತ್ತೆ ಭವಮಾಲೆಗೆ ಹೊದ್ದಲೀಯದು, ನೋಡಾ.