ಬಸವಣ್ಣ   
  ವಚನ - 146     
 
ಭಕ್ತಿ ಎಂತಹುದಯ್ಯಾ? ದಾಸಯ್ಯ ಮಾಡಿದಂತಹುದಯ್ಯಾ. ಭಕ್ತಿ ಎಂತಹುದಯ್ಯಾ? ಸಿರಿಯಾಳ ಮಾಡಿದಂತಹುದಯ್ಯಾ. ಭಕ್ತಿ ಎಂತಹುದಯ್ಯಾ? ನಮ್ಮ ಸಿಂಧುಬಲ್ಲಾಳ ಮಾಡಿದಂತಹುದಯ್ಯಾ. ಭಕ್ತಿ ಎಂತಹುದಯ್ಯಾ? ಕೂಡಲಸಂಗಮದೇವಾ, ನೀ ಬಾಣನ ಬಾಗಿಲ ಕಾಯ್ದಂತಹುದಯ್ಯಾ.