ಬಸವಣ್ಣ   
  ವಚನ - 147     
 
ಮುನ್ನಿನವರು ಹೋದ ದಾರಿ ಭಯ, ಕಾಣಿರಣ್ಣಾ! ಬಲ್ಲಾಳನ ವಧುವಿನೊಡನೆ ಸರಸವಾಡಿದಂದಿಂದ ಭಯ, ಕಾಣಿರಣ್ಣಾ! ಸಿರಿಯಾಳನ ಮಗನ ಬೇಡಿದಂದಿಂದ ಭಯ, ಕಾಣಿರಣ್ಣಾ! ದಾಸನ ವಸ್ತ್ರವ ಸೀಳಿದಂದಿಂದ ಭಯ, ಕಾಣಿರಣ್ಣಾ! ಅಘಟಿತಘಟಿಕರು, ವಿಪರೀತಚರಿತರು- ಕೂಡಲಸಂಗನ ಶರಣರು ನಡೆದ ದಾರಿ ಭಯ, ಕಾಣಿರಣ್ಣಾ!!