ಬಸವಣ್ಣ   
  ವಚನ - 149     
 
ನೆರೆ ನಂಬೋ ನೆರೆ ನಂಬೋ, ಧರಧುರವಿಲ್ಲದೆ ಸಾಮವೇದಿಗಳಂತೆ; ನೆರೆ ನಂಬೋ ನೆರೆ ನಂಬೋ, ದಾಸ-ದುಗ್ಗಳೆಯಂತೆ; ನೆರೆ ನಂಬೋ ನೆರೆ ನಂಬೋ, ಸಿರಿಯಾಳ-ಚಂಗಳೆಯಂತೆ; ನೆರೆ ನಂಬೋ ನೆರೆ ನಂಬೋ,ಸಿಂಧು-ಬಲ್ಲಾಳನಂತೆ. ನಂಬಿದೆಯಾದಡೆ ತನ್ನನೀವ ಕೂಡಲಸಂಗಮದೇವ.