ಬಸವಣ್ಣ   
  ವಚನ - 153     
 
ಗೀತವ ಬಲ್ಲಾತ ಜಾಣನಲ್ಲ; ಮಾತ ಬಲ್ಲಾತ ಜಾಣನಲ್ಲ: ಜಾಣನು ಜಾಣನು, ಆತ ಜಾಣನು: ಲಿಂಗವ ನೆರೆ ನಂಬಿದಾತ ಜಾಣನು ಜಂಗಮಕ್ಕೆ ಸವೆಸುವಾತ. ಆತ ಜಾಣನು: ಜವನ ಬಾಯಲು ಬಾಲವ ಕೊಯ್ದು ಹೋದಾತ; ಆತ ಜಾಣನು, ನಮ್ಮ ಕೂಡಲಸಂಗನ ಶರಣನು.