ಬಸವಣ್ಣ   
  ವಚನ - 168     
 
ನಿಮಿಷದ ನಿಮಿಷಂ ಬೋ, ಕ್ಷಣದೊಳಗರ್ಧಂ ಬೋ, ಕಣ್ಣುಮುಚ್ಚಿ ಬಿಚ್ಚುವೈಸು ಬೇಗಂ ಬೋ, ಸಂಸಾರದಾಗುಂ ಬೋ! ಸಂಸಾರದ ಹೋಗುಂ ಬೋ! ಸಂಸಾರದೊಪ್ಪಂ ಬೋ! ಕೂಡಲಸಂಗಮದೇವಾ, ನೀ ಮಾಡಿದ ಮಾಯೇಂ ಬೋ, ಅಭ್ರಚ್ಛಾಯೇಂ ಬೋಂ.