ಬಸವಣ್ಣ   
  ವಚನ - 173     
 
ಅಚ್ಚಿಗವೇಕಯ್ಯಾ ಸಂಸಾರದೊಳಗೆ? ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು; ಬೇಗ ಬೇಗ ಅರ್ಚನೆ-ಪೂಜೆನೆಯ ಮಾಡುವುದು, ಕೂಡಲಸಂಗನ ಕೂಡುವುದು.