ಬಸವಣ್ಣ   
  ವಚನ - 179     
 
ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ! ಶಿವಶರಣರ ಮುಂದೆ ಆ(ಡಿ)ರಯ್ಯಾ ಹಾ(ಡಿ)ರಯ್ಯಾ. ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ, ನಮ್ಮ ಕೂಡಲಸಂಗಮದೇವ.