ಹಮ್ಮಿನ ಭಕ್ತಿ ಕರ್ಮಕೆ ಮೊದಲು:
ವರ್ಮವನರಿಯದ ಮಾಟ ಸಯಿದಾನದ ಕೇಡು!
ಬಂದ ಸಮಯೋಚಿತವನರಿಯದಿದ್ದರೆ
ನಿಂದಿರಲೊಲ್ಲ ಕೂಡಲಸಂಗಮದೇವ.
Transliteration Ham'mina bhakti karmakke modalu:
Varmavanariyada māṭa sayidānada kēḍu!
Banda samayōcitavanariyadiddare
nindiralolla kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Self-centred piety
Is Karma's foundation-stone.
To do, and not to know
The spirit of what you do,
Is so much waste of means!
Unless you know how opportune
The occasion when it comes,
Lord Kūḍala Saṅgama
Will never wait.
Translated by: L M A Menezes, S M Angadi
Hindi Translation अहंकार पूर्ण भक्ति कर्म मूल है
मर्म से अनभिज्ञ कर्म से साधन की हानि है
समय का औचित्य न जानने पर
कूडलसंगमदेव नहीं रुकते॥
Translated by: Banakara K Gowdappa
Telugu Translation ద్వైతా ద్వైతముచదివి మీ
రేమి సేయుదురయ్యా మా శరణుల గురికి
లక్కగ కరగు నందాక;
స్థావర జంగమ మొకటేయని నమ్మునందాక;
రిత్తమాట వరుసల నేర్వ ఫలమేమి?
కూడల సంగమదేవా!
Translated by: Dr. Badala Ramaiah
Tamil Translation ஆணவம் மிகுந்த பக்தி வினைக்கு மூலம்
ஒளிவு மறைவினையறியா செயல் பொருட்கேடன்றோ;
வந்தபொழுதின் மேன்மையை அறியாதிருப்பின்
ஆங்கு -- நிலைகொளான் கூடல சங்கம தேவன்
Translated by: Smt. Kalyani Venkataraman, Chennai
Marathi Translation
अहंकाराने केलेली भक्ती कर्माचे मूळ आहे.
मर्म जाणल्याविना केलेलीभक्ती, ते पदार्थ व्यर्थ आहेत.
आलेल्या वेळेचे महत्त्व जाणले नाही तर
तुमच्यात कूडलसंगमदेव थांबणार नाही.
Translated by Shalini Sreeshaila Doddamani
ಶಬ್ದಾರ್ಥಗಳು ಮರ್ಮ = ; ಸಯಿದಾನ = ; ಹಮ್ಮು = ಗರ್ವ;
ಕನ್ನಡ ವ್ಯಾಖ್ಯಾನ ನಿರಹಂಕಾರದಿಂದ ಮಾಡುವ ಶಿವಪೂಜಾದಿ ಧರ್ಮಕಾರ್ಯಗಳಲ್ಲಿ-ಹಮ್ಮಿನ ಸೋಂಕೇ ಇಲ್ಲದೆ-ಮಾಡಿಸುವನು ಶಿವನೆಂಬ ದಾಸೋಹಂಭಾವ ಬಲಿತು, ಸೇವೆಯಲ್ಲಿ ಕಾರ್ಯೋನ್ಮುಖವಾಗಿರುವುದು ಭಕ್ತಿಕಾಂಡ.
ಪೂಜಾದಿ ಧರ್ಮಕಾರ್ಯಗಳಲ್ಲಿ ಧರ್ಮಾಂಶ ಕನಿಷ್ಠವಾಗಿ, ಪ್ರದರ್ಶನಾಂಶ ಗರಿಷ್ಠವಾಗಿ, ಸೇವಾ ಮನೋಭಾವ ಸೊನ್ನೆಯಾಗಿ-ತನ್ನ ಮನೆಗೆ ಶಿವಭಕ್ತರು ಬಂದರೇನು ನಿಂದರೇನು ಅವಮಾನಿತರಾದರೇನು ಹಿಂದಿರುಗಿದರೇನು ಎಂಬುದೊಂದನ್ನೂ ಲೆಕ್ಕಿಸದೆ ತನ್ನ ಅಹಂಕಾರದಲ್ಲಿ ತಾನು ಮೈಮರೆತಿರುವುದು ಕರ್ಮಕಾಂಡ.
ಇಂಥವನು ಮಾಡಿದ ಶಿವಪೂಜೆಯು ಪಾಪಾರ್ಜನೆಗೆ ಬಂಡವಾಳವಾಗುವುದಷ್ಟೆ, ಹದ ಗೊತ್ತಿಲ್ಲದೆ ಮಾಡಿದ ಆರಾಧನೆ ಆಡಂಬರವೆಲ್ಲ ದವಸಧಾನ್ಯದ ದುರ್ಬಳಕೆ. ಇಂಥ ಕೊಳೆಗೇರಿಯಲ್ಲಿ ಶಿವನು-ಬಂದಿದ್ದು ತಪ್ಪಾಯಿತೆಂದು-ಫೇರಿಕೀಳುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು