ಬಸವಣ್ಣ   
  ವಚನ - 190     
 
ಹಮ್ಮಿನ ಭಕ್ತಿ ಕರ್ಮಕೆ ಮೊದಲು: ವರ್ಮವನರಿಯದ ಮಾಟ ಸಯಿದಾನದ ಕೇಡು! ಬಂದ ಸಮಯೋಚಿತವನರಿಯದಿದ್ದರೆ ನಿಂದಿರಲೊಲ್ಲ ಕೂಡಲಸಂಗಮದೇವ.