•  
  •  
  •  
  •  
Index   ವಚನ - 216    Search  
 
ಭಕ್ತನ ಜ್ಞಾನಿಸ್ಥಲ - ತ್ರಿವಿಧ ದಾಸೋಹ
ಧನಕ್ಕೆ ಮನವನೊಡ್ಡಿದರೇನು? ಮನಕ್ಕೆ ಧನವನೊಡ್ಡಿದರೇನು? ತನು, ಮನ, ಧನವ ಮೀರಿ ಮಾತಾಡಬಲ್ಲರೆ ಆತ ನಿಸ್ಸೀಮನು; ಆತ ನಿಜೈಕ್ಯನು. ತನು, ಮನ, ಧನವನುವಾದರೆ ಕೂಡಲಸಂಗಮದೇವನೊಲಿವ.
Transliteration Dhanakke manavanoḍḍidarēnu? Manakke dhanavanoḍḍidarēnu? Tanu, mana, dhanava mīri mātāḍaballare āta nis'sīmanu; āta nijaikyanu. Tanu, mana, dhanavanuvādare kūḍalasaṅgamadēvanoliva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 What if you array your mind To wealth? What if you array your wealth To mind? He who can speak Transcending body, mind and wealth, Is boundless; he is one With the Reality. Lord Kūḍala Saṅgama loves him Whose body, mind and wealth Are ready to dedicate. Translated by: L M A Menezes, S M Angadi
Hindi Translation धन में मन लगाने से क्या? मन में धन लगाने से क्या? तन, मन, धन के परे जो बातें कर सके वह निस्सीम है, वह निजैक्य’ है तन, मन, धन समर्पित हो, तो कूडलसंगमदेव प्रसन्न होंगे ॥ Translated by: Banakara K Gowdappa
Telugu Translation ధమునకు మనమధీన మైననేమి? మనసునకు ధనమధీన మైననేమి? తను-మన-ధనముల దాటి మాటాడకల్గిన వాడే నిస్సీముడు; వాడే నిజైక్యుడు తను మన ధనముల త్యాగంబు సేయ కూడల సంగమదేవుడు లోగూడునయ్యా! Translated by: Dr. Badala Ramaiah
Tamil Translation பொருள் மனதைச் சார்பிலென்ன? மனம் பொருளைச் சார்பிலென்ன உடல், மனம், பொருளை மீறி உரைப்பின், அவன் எல்லையற்றோன், மெய்யுடனிணைந்தோன் உடல், மனம், பொருளை யீயின் கூடல சங்கம தேவன் அருள்வான். Translated by: Smt. Kalyani Venkataraman, Chennai
Marathi Translation धनासाठी मन आतुर होऊन काय होणार? मनासाठी धनव्यय केल्याने काय होणार आहे? तन-मन-धन मोहरहित होऊन दासोह करणारा निस्सीम आहे, तोच निजैक्य आहे. तन, मन, धन अर्पिल्याने कूडलसंगमदेव प्रसन्न होई. Translated by Shalini Sreeshaila Doddamani
ಶಬ್ದಾರ್ಥಗಳು ನಿಸ್ಸೀಮ = ಸೀಮೆ ಇಲ್ಲದವ;
ಕನ್ನಡ ವ್ಯಾಖ್ಯಾನ ಭಕ್ತರಲ್ಲಿ ನಿಸ್ಸೀಮನು ಯಾರು ? ತನ್ನ ತನುವನ್ನು ಕುರಿತು, ತನ್ನ ಮನವನ್ನು ಕುರಿತು, ತನ್ನ ಧನವನ್ನು ಕುರಿತು ಲೋಭದಿಂದ ವರ್ತಿಸದವನೇ ನಿಸ್ಸೀಮನು. ಅವನೇ ಲಿಂಗಾಂಗಸಾಮರಸ್ಯವನ್ನು ಸಾಧಿಸಿದವನು ಕೂಡ. ಯಾವನು ತನ್ನ ತನುಮನಧನದ ಸೀಮೆಗಳನ್ನು ಪರಾರ್ಥಕ್ಕಾಗಿ ತೆರೆದಿಡುವನೋ ಅವನಿಗೆ ಶಿವನೊಲಿಯುವನು, ಹಾಗಲ್ಲದೆ ಧನವನ್ನು ಕೇಳಿದಾಗ-ಅದಕ್ಕೆ ಬದಲಾಗಿ ಮನವನ್ನೂ, ಮನವನ್ನು ಕೇಳಿದಾಗ-ಅದಕ್ಕೆ ಬದಲಾಗಿ ತನುವನ್ನೂ ಕೊಡುವೆನೆನ್ನುತ್ತ ತನು-ಮನ-ಧನದಲ್ಲಿ ವಂಚಕನಾದ ಪ್ರಾಪಂಚಿಕನಿಗೆ ಶಿವನೊಲಿಯನು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು