ಬಸವಣ್ಣ   
  ವಚನ - 220     
 
ಬರಬರ ಭಕ್ತಿಯರೆಯಾಯಿತ್ತು ಕಾಣಿರಣ್ಣಾ: ಮೊದಲ ದಿನ ಹಣೆಮುಟ್ಟಿ, ಮರುದಿನ ಕೈಯ ಮುಟ್ಟಿ ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ! ಹಿಡಿದುದ ಬಿಡದಿದ್ದರೆ ಕಡೆಗೆ ಚಾಚುವ; ಅಲ್ಲದಿದ್ದರೆ ನಡು ನೀರಲ್ಲದ್ದುವ ನಮ್ಮ ಕೂಡಲಸಂಗಮದೇವ.