•  
  •  
  •  
  •  
Index   ವಚನ - 251    Search  
 
ಭಕ್ತನ ಭಕ್ತಸ್ಥಲ - ದುರ್ವ್ಯಸನ
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯಾ; ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯಾ; ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ, ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ ಸಲುಹು, ಕೂಡಲಸಂಗಮದೇವಾ!
Transliteration Karagisi enna manada kāḷikeya kaḷeyayyā; ore baṇṇakke tandenna puṭavikki nōḍayyā; kaḍ'̔ihakke baḍ'̔ihakke tandenna kaḍeyāṇiya māḍi, nim'ma śaraṇara pādakke toḍigeya māḍi saluhu, kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy:
English Translation 2 Melt my mind and purge its stains, Test it and in fire refine! Hammer, so the hammer pains, To pure gold this heart of mine! Beat from me, great Craftsman, beat Anklets for Thy devotees' feet: Save me, Lord Kūḍala Saṅgama! Translated by: L M A Menezes, S M Angadi
Hindi Translation पिघला कर मेरे मन का कलंक दूर करो, मुटपाक से कसौटी के योग्य परिशुद्ध बनाओ, मुझे काटकूटकर स्वर्णाभरण बनाओ- अपने शरणों के चरणों के लिए आभूषण बनाकर मेरी रक्षा करो, कूडलसंगमदेव ॥ Translated by: Banakara K Gowdappa
Telugu Translation కరగించి నామనః కల్మషము కడుగుమయ్యా ఒర వెట్టి వన్నెకు రాగ పుటమిడి చూడుమయ్యా: చరచి విఱచి మెత్తబడి మెఱుగెక్కనీ శరణుల చరణములకు కడియంబు సేసి తొడుగుమయ్యా! కూడల సంగమదేవయ్యా! Translated by: Dr. Badala Ramaiah
Tamil Translation கரைத்து என் மனச் செயிரைக் களைவாயையனே, உரைகல்லிலென் தூய்மையை யுரைத்துப் பாருமையனே, என்னைத் துண்டு செய்து அடித்துப் பசும் பொன்னாக்கி உன் அடியார் தாளிணைக்கு அணியெனச் செய்தருள்வாய் கூடல சங்கம தேவனே. Translated by: Smt. Kalyani Venkataraman, Chennai
Marathi Translation असे जरी माझे, कलुषित मन काढावे धुवून तुजलागी करावे ते सोने, शुद्ध तापवून पाहावे घासून, पारखून मन माझे झाले, शुद्ध सोन्यापरी काढावी कुसरी, तयावरी तापवून बडवून, घासून सुंदर करा अलंकार, प्रभो त्याचे कूडलसंगमदेवा ! ऐसा अलंकार शरण चरणावर ठेवीन मी अर्थ - हे प्रभो ! माझ्या मनातील कलुषता धुऊन काढण्यासाठी त्याला घासून तापवून शुद्ध करावे. नंतर त्याला कसोटीला लावून पारखून घ्यावे. जर ते शुद्ध सोन्यासारखे झाल्याची तुला खात्री वाटत असेल तर त्याला तापवून, बडवून व घासून त्याचे सुंदर असे अलंकार करावे. असा सुंदर अलंकार मला शिवशरणांच्या चरणी अर्पण करणे आहे. अशी महात्मा बसवेश्वर परमेश्वर चरणी प्रार्थना करीत आहेत Translated by Rajendra Jirobe, Published by V B Patil, Hirabaug, Chembur, Mumbai, 1983 वितळवून माझ्या मनाचा कलंक दूर करा देवा. कसाला घासून-पारखून घ्यावे देवा. ठोकून-बडवून शुध्द सोने बनवावे देवा. तुमच्या शरणांच्या चरणीचे आभरण मजला बनवून माझे पालन करा कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಒರೆ = ; ಕಡಿಹ = ಚುರು ಮಾಡುವಿಕೆ; ಕಾಳಿಕೆ = ; ತೊಡಿಗೆ = ಆಭರಣ; ಪುಟವಿಕ್ಕಿ = ಕರಗಿಸಿ ಅವಲೋಹವನ್ನು ಶುದ್ದಮಾಡು;
ಕನ್ನಡ ವ್ಯಾಖ್ಯಾನ ಮನಸ್ಸು ಚಿನ್ನದ ಅದಿರು-ಅದು ಕಾಳಿಕೆ ಕಳೆದು ಚಿನ್ನವಾಗಬೇಕು, ಚಿನ್ನದೊಡವೆಯಾಗಿ ಶರಣರ ಪಾದಾಭರಣವಾಗಬೇಕು. ಆದರೆ ಮನವೆಂಬ ಅದಿರಿನಲ್ಲಿ ಕೂಡಿರುವ ಭ್ರಮೆ ಸಂಶಯಗಳ ಆ ಕಾಳಿಕೆ ಕಳೆಯುವುದು ಸುಲಭವಲ್ಲ. ಪೂಜೆ ಸೇವೆ ತ್ಯಾಗವೆಂಬ ಮೂಸೆಯಲ್ಲಿ ಅದನ್ನಿಟ್ಟು-ಆತ್ಮಚಿಂತನದ ಅಗ್ನಿಯಲ್ಲಿ-ದಿವ್ಯ ವಿರಹದ ನಿಟ್ಟುಸಿರಿನ ತಿದಿಯೊತ್ತಿ ಕರಗಿಸಬೇಕು. ಕಣ್ಣೀರ ಬಾಷ್ಪದಲ್ಲಿ ಅದ್ದಿ, ದೂಷಕರ ಆರೋಪಣೆಯ ಒರೆಗಲ್ಲ ಮೇಲೆ ಉಜ್ಜಿ-ಇನ್ನೂ ಐದೇ ಬಣ್ಣ, ಹತ್ತೇ ಬಣ್ಣ, ಹದಿನೈದೇ ಬಣ್ಣವೆಂದು-ಹದಿನಾರು ಬಣ್ಣದ ಮಟ್ಟಕ್ಕೆ ನಿಷ್ಕಲ್ಮಷವಾಗುವ ವರೆಗೆ-ಮರಳಿ ಮರಳಿ ಕಾಸಬೇಕು ಸೋಸಬೇಕು. ಆಗಲೂ ಚೊಕ್ಕವಾದೆನೆಂಬ ಕಾರಣದಿಂದಲೇ ತನ್ನಲ್ಲಿ ಸಂಕ್ರಮಿಸಬಹುದಾದ ಅಹಂಕಾರದ ಓರೆಯನ್ನು ದಾಸೋಹಂಭಾವದ ಉಳಿಯಿಂದ ಕಡಿದು ಸಮ ಮಾಡಿ, ಮಮಕಾರದ ಕೋರೆಯನ್ನು ಶಿವಪ್ರಸಾದದ ಅರದಿಂದ ಉಜ್ಜಿ ಓರಣ ಮಾಡಿ, ಶಿವಾಜ್ಞೆಯ ಸುತ್ತಿಗೆಯಿಂದ ಬಡಿದು ನಯಮಾಡಿ ಕಟ್ಟಾಣಿಯ ಸರಮಾಡಿ ಶರಣರ ಪಾದಕ್ಕೆ ತೊಡಿಸಬೇಕು. ಹೀಗೆ ಈ ವಚನದಲ್ಲಿ ಬಸವಣ್ಣನವರು ಮಾನವನ ಮನಶ್ಯಕ್ತಿಯ ಮೂಲಧಾತುವನ್ನೂ ಅದರ ಸಾಧ್ಯತೆಗಳನ್ನೂ ಗುರುತಿಸಿಕೊಟ್ಟು-ಅದೆಲ್ಲ ಸಾರ್ಥಕವಾಗಬೇಕಾದರೆ ಶರಣರ ಕಾಲಿಗೆ ಬೀಳಬೇಕೆಂದು ಉಪದೇಶಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು