ಭಕ್ತನ ಭಕ್ತಸ್ಥಲ - ಸತ್ವಪರೀಕ್ಷೆ
ಇರಿಸಿಕೊಂಡು ಭಕ್ತರಾದರೆಮ್ಮವರು;
ತರಿಸಿಕೊಂಡು ಭಕ್ತರಾದರೆಮ್ಮವರು;
ಕೊರೆಯಿಸಿಕೊಂಡು ಭಕ್ತರಾದರೆಮ್ಮವರು;
ಜರೆಯಿಸಿಕೊಂಡು ಭಕ್ತರಾದರೆಮ್ಮವರು;
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು!
Transliteration Irisikoṇḍu bhaktarādarem'mavaru;
tarisikoṇḍu bhaktarādarem'mavaru;
koreyisikoṇḍu bhaktarādarem'mavaru;
jareyisikoṇḍu bhaktarādarem'mavaru;
kūḍalasaṅgana śaraṇarige muḷisa tāḷi
enna bhakti areyāyittu!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Our own have become devotees
By being stabbed;
Our own have become devotees
By being cut;
Our own have become devotees
By being sawed;
Our own have become devotees
By being reviled.
If I bear anger against
Kūḍala Saṅga's Śaraṇās
My piety is halved !
Translated by: L M A Menezes, S M Angadi
Hindi Translation चुभवाकर भक्त बने, हमारे लोग,
सर कटवाकर भक्त बने, हमारे लोग,
चिरवाकर भक्त बने, हमारे लोग,
गाली खाकर भक्त बने, हमारे लोग,
कूडलसंगमदेव के शरणों पर कृद्ध होने से
मेरी भक्ति आधी घट गई ॥
Translated by: Banakara K Gowdappa
Telugu Translation పొడిపించుకొని మా వారు భక్తులైరి
తలద్రుంచుకొని మా వారు భక్తులైరి
ఖండిరచుకొని మా వారు భక్తులైరి
జడిపించుకొని మా వారు భక్తులైరి
సంగని శరణుల కోపింప నాభక్తి కొఱయయ్యెనయ్యా!
Translated by: Dr. Badala Ramaiah
Tamil Translation தள்ளிக் கொண்டு பக்தராயினர் நம்மவர்,
வெட்டிக் கொண்டு பக்தராயினர் நம்மவர்,
குடைந்து கொண்டு பக்தராயினர் நம்மவர்,
வசை பாடிக் கொண்டு பக்தராயினர் நம்மவர்,
கூடல சங்கனின் அடியாரைச் சினந்து
என் பக்தி குன்றியதன்றோ.
Translated by: Smt. Kalyani Venkataraman, Chennai
Marathi Translation
टोचून भक्त झाले पुरातन,
छेदून भक्त झाले पुरातन,
कापून भक्त झाले पुरातन,
निंदा ऐकून भक्त झाले पुरातन,
कूडलसंगमदेवाच्या
शरणावर रागविल्याने अर्धवट झाली माझी भक्ती.
Translated by Shalini Sreeshaila Doddamani
ಶಬ್ದಾರ್ಥಗಳು ಜರಿ = ; ಮುಳಿಸ = ಸಿಟ್ಟು ಮಾಡು;
ಕನ್ನಡ ವ್ಯಾಖ್ಯಾನ ಭಕ್ತರಾಗುವುದು ಸುಲಭವಲ್ಲ. ಶಿವಶರಣರು ಒಡ್ಡುವ ಅಗ್ನಿಪರೀಕ್ಷೆಗಳಿಂದ ಯಶಸ್ವಿಯಾಗಿ ಹೊರ ಬರದೆ ಯಾವನೂ ಭಕ್ತನೆನಿಸಲಾರ-ಎನ್ನುತ್ತ ಬಸವಣ್ಣನವರು ತಮಿಳುನಾಡಿನ 63 ಜನ ಪುರಾತನರಲ್ಲಿ ನಾಲ್ವರನ್ನು ಪ್ರಸ್ತಾಪಿಸಿರುವರು:
(1) ಮೊನೆಯಿಡುನಾಯ್ನಾರನು ತನ್ನ ಹಿಂತಲೆಯಲ್ಲಿದ್ದ ಯೌವನಮಣಿಯನ್ನು ಶರಣನೊಬ್ಬನು ಬಯಸಿದರೆ-ಕೊಡಲಿಯಿಂದ ಹಿಂತಲೆಯನ್ನು ತರಿದು ಮಣಿಯನ್ನು ತೆಗೆದುಕೊಳ್ಳಲು ಅನುಮತಿಯಿತ್ತ,
(2) ಸಿಂಧುಮರಾಳನೆಂಬ ರಾಜನು ತನ್ನ ಅರ್ಧದೇಹವನ್ನು ಕೇಳಿದ ಶರಣನೊಬ್ಬನಿಗೆ ಕರಗಸದಿಂದ ಕೊರೆದು ಅದನ್ನು ಬಿಡಿಸಿಕೊಳ್ಳಲು ಒಪ್ಪಿದ.(3) ಪೊನ್ನಾಂಬಲದ ತಿರುನೀಲಕಂಠನಾಯನಾರನು ಮದುವೆಯಾದ ಹೊಸದರಲ್ಲೇ ಹೆಂಡತಿಗೆ ತನ್ನ ಬಗ್ಗೆ ಸಂಶಯ ಬಂದು ಆಕೆ ಅವನಿಗೆ ಮುಟ್ಟಬಾರದೆಂದು ಹೇಳಿ ಶಿವನಾಣೆಯಿಡುವಳು. ಅದನ್ನವನು ಶಿವಾಜ್ಞೆಯೆಂದೇ ಭಾವಿಸಿ ಮುಪ್ಪಾನ ಮುದುಕನಾದರೂ ಆವರೆಗೂ ಅವಳನ್ನು ಮುಟ್ಟಲೂ ಇಲ್ಲ. ಹೀಗಿರಲು ಒಂದು ದಿನ ಶಿವನು ಶರಣನ ವೇಷ ಧರಿಸಿ ಬಂದು ಅವನಲ್ಲಿ ತನ್ನ ಭಿಕ್ಷಾಪಾತ್ರೆಯನ್ನಿರಿಸಿ ಹೋಗಿ ಅದನ್ನು ತಾನೇ ಮಾಯ ಮಾಡಿ-ಮರಳಿ ಬಂದು ಕೇಳಿ-ಇಲ್ಲವೆಂದಾಗ ಅವನನ್ನೂ ಅವನ ಹೆಂಡತಿಯನ್ನೂ ಕಳ್ಳರೆಂದು ಮೋಸಗಾರರೆಂದು ಬಾಯಿಗೆ ಬಂದಂತೆ ಬೈಯುತ್ತಾನೆ-ಜನರ ಮುಂದೆ ಪಂಚಾಯತಿ ಮಾಡಿ ಛೀಮಾರಿ ಹಾಕುತ್ತಾನೆ. ಆದರೂ ಮುದುಕ ತಿರುನೀಲಕಂಠನು ಆ ಮಾಯಾವಿ ಶರಣನಿಗೆ ಪ್ರತಿಯಾಗಿ ಮಾತನಾಡದೆ ಭಕ್ತಿಯಿಂದಲೇ ನಡೆದುಕೊಂಡು(ಶಿವನ) ಪ್ರೀತಿಗೆ ಪ್ರಾತ್ರನಾಗುತ್ತಾನೆ.
ಈ ಮೇಲಣ ಮೂರೂ ನಿದರ್ಶನಗಳು ಶಿವನಿಗೆ ಮತ್ತು ಅವನಿಗೆ ವಿಧೇಯರಾಗಿದ್ದ ಖುದ್ದು (ಶಿವ) ಶರಣರ ಕಥೆಯಾದರೆ-ನಾಲ್ಕನೆಯದಾದ ಈ ಸೇದಿರಾಜನ ಕತೆ ಕುರಿತಿರುವುದು (ವಂಚಕರು ಹಾಕಿದ) ಶರಣರ ವೇಷಕ್ಕೂ ಯಥಾಪ್ರಕಾರ ವಿಶ್ವಾಸ ತೋರಿಸಬೇಕೆಂಬುದನ್ನು : ಸೇದಿರಾಜನಿಗೂ ಅವನ ದಾಯಾದಿಗಳಿಗೂ ರಾಜ್ಯ ವಿಭಾಗದ ವಿಷಯವಾಗಿ ಭಿನ್ನಾಭಿಪ್ರಾಯ ಹುಟ್ಟಿತು, ದ್ವೇಷ ಬೆಳೆಯಿತು. ದಾಯಾದಿಗಳು ಮಚ್ಚರದಿಂದ ಶರಣರ ವೇಷ ಧರಿಸಿ ಬಂದು ಅವನ ಮೇಲೆ ಹಲ್ಲೆಮಾಡಿ ಕಠಾರಿಯಿಂದ ಇರಿದರು. ಅವರು ಶರಣರ ವೇಷದಲ್ಲಿ ಬಂದು ಇರಿದುದರಿಂದ ಅವರಿಗೆ ರಾಜನು ಪ್ರತಿಭಟಿಸಲಿಲ್ಲ.
ಹೀಗೆ ಶರಣರ ಬಗ್ಗೆ ಎಷ್ಟು ಅಸಾಧಾರಣ ಸೈರಣೆಯನ್ನು ಸ್ವತಃ ತಾಳಿದವರಾದರೂ-ಆ ಶರಣರ ವರ್ತನೆಗಳು ಅತಿರೇಕಕ್ಕೆ ಹೋದಾಗ ಒಮ್ಮೆ ಅವರ ಮೇಲೆ ಬಸವಣ್ಣನವರು ಮುಳಿದಿದ್ದೂ ಉಂಟು. ಅಂಥ ಒಂದು ಪ್ರಸಂಗದಲ್ಲಿ ಪಶ್ಚಾತ್ತಾಪದಿಂದ ಹೊರಟ ಉದ್ಗಾರ ಈ ವಚನದಲ್ಲಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು