ಲಿಂಗವ ನಚ್ಚದೀ ಮನವು, ಜಂಗಮವ ನಂಬದೀ ಮನವು;
ಕೂಪರ ಕಂಡರೆ ಒಲ್ಲದೀ ಮನವು.
ಈ ಮನದ ಭ್ರಮೆಯನೆಲ್ಲವ ಮರೆಸಿ,
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು,
ಕೂಡಲಸಂಗಮದೇವಾ.
Transliteration Liṅgava naccadī manavu, jaṅgamava nambadī manavu;
kūpara kaṇḍare olladī manavu.
Ī manada bhrameyanellava maresi,
nim'ma śaraṇarige śaraṇembuda karuṇisu,
kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My heart has lost its love
For Liṅga.
My heart has lost its faith
In Jaṅgama.
It hates whenever it sees
Those that bear love.
O bless me, that I forget
All errors of my heart
And bow to the Śaraṇās ,
O Kūḍala Saṅgama Lord !
Translated by: L M A Menezes, S M Angadi
Hindi Translation लिंग पर श्रद्धा नहीं रखता, यह मन,
जंगम पर विश्वास नहीं करता, यह मन,
प्रेमियों को नहीं चाहता, यह मन,
इस मन का भ्रम भुला कर
अपने शरणों को प्रणाम करना
अनुगृहीत करो कूडलसंगमदेव ॥
Translated by: Banakara K Gowdappa
Telugu Translation శివుని మెచ్చ దీ మనసు శివభక్తుల మెచ్చదీ మనసు;
తనవారి జూచిన తగుల దీ మనసు; నా భ్రాంతి చెఱచి;
నీ శరణులకు శరణనుట కరుణింపుమో దేవా!
Translated by: Dr. Badala Ramaiah
Tamil Translation இலிங்கத்தை நயவாது மனம் அடியாரை ஏற்காது மனம்,
அன்புகெழுமிய அடியாரைக் காணின் நயவாதிம்மனம்,
இம்மனத்தி னறியாமையினை யகற்றி,
உன் அடியார்க்குத் தஞ்சமென்பதற்கு அருள்வாய்,
கூடல சங்கம தேவனே.
Translated by: Smt. Kalyani Venkataraman, Chennai
Marathi Translation
लिंगावर विश्वास ठेवत नाही मन,
जंगमावर विश्वास ठेवत नाही मन,
आपल्या लोकांच्यावर विश्वास ठेवत नाही मन,
या मनाचा भ्रम दूर करावा.
तुमच्या शरणांला शरण म्हणावे अशी
कृपा करावी कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕೂಪರ = ಬಾವಿ; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ನಚ್ಚು = ನಂಬು; ಭ್ರಮೆ = ಭ್ರಮಣೆ;
ಕನ್ನಡ ವ್ಯಾಖ್ಯಾನ ಮೊದಲು ಲಿಂಗವನ್ನು ಅವಧಾನಭಕ್ತಿಯಿಂದ ಅರ್ಚಿಸಬೇಕು, ಅದಕ್ಕೆ ಸಾಕ್ಷಿಯಾಗಿ ಅನುಭಾವಭಕ್ತಿಯಿಂದ ಜಂಗಮವನ್ನು ಅರ್ಚಿಸಬೇಕು, ಭಕ್ತರನ್ನು ಆನಂದಭಕ್ತಿಯಿಂದ ಓಲೈಸಬೇಕು-ಆದರೆ ಈ ಮನಸ್ಸು ನಾನಾ ಭ್ರಮೆಗಳ ಸೆಳೆವಿಗೆ ಸಿಕ್ಕಿ ಎತ್ತೆತ್ತಲೋ ಕೊಚ್ಚಿ ಹೋಗುತ್ತಿದೆ. ಇದನ್ನು ತಪ್ಪಿಸಿ, ಭಕ್ತಿಮಾರ್ಗದಲ್ಲಿ ನಡೆಸಿ-ನನ್ನನ್ನು ಶಿವಶರಣರಿಗೆ ಒಪ್ಪಿಸಿಕೊಡು ಎಂದು ಬಸವಣ್ಣನವರು ಶಿವನನ್ನು ಕುರಿತು ಪ್ರಾರ್ಥಿಸುತ್ತಿರುವರು.
ಅಥವಾ-ತನ್ನನ್ನು ರಕ್ಷಿಸುವ ಲಿಂಗಜಂಗಮದಲ್ಲಿ ವಿಶ್ವಾಸವಿಲ್ಲದೆ, ತನ್ನನ್ನು ಪ್ರೀತಿಸುವ ಭಕ್ತರಲ್ಲಿ ಒಲುಮೆಯಿಲ್ಲದೆ-ಅಂಗದಿಚ್ಛೆಗೆ ಅಲೆದು ನಾನಾ ಭ್ರಮೆಗಳಲ್ಲಿ ಭಂಗಪಡುತ್ತಿರುವ ತಮ್ಮ ಮನಸ್ಸಿಗೆ ಬುದ್ಧಿ ಹೇಳಿ-ಶರಣರಿಗೆ ಶರಣೆನ್ನುವುದನ್ನು ಮೊದಲು ಕಲಿಸು ಎಂದು ಬಸವಣ್ಣನವರು ಕಾಣದ ದೇವರಿಗೆ ಕೈ ಮುಗಿಯುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು