ಬಸವಣ್ಣ   
  ವಚನ - 277     
 
ಮನವೇ, ನಿನ್ನ ಜನ್ಮದ ಪರಿಭವವ ಮರೆದೆಯಲ್ಲಾ, ಮನವೇ! ಲಿಂಗವ ನಂಬು ಕಂಡಾ, ಮನವೇ; ಜಂಗಮವ ನಂಬು ಕಂಡಾ, ಮನವೇ; ಕೂಡಲಸಂಗಮದೇವರ ಬಿಡದೆ ಬೆಂಬತ್ತು, ಕಂಡಾ, ಮನವೇ.