ಬಸವಣ್ಣ   
  ವಚನ - 301     
 
ಹೇಡಿ ಬಿರುದ ಕಟ್ಟಿದಂತಾಯಿತ್ತೆನ್ನ ವೇಷ: ಕಾದಬೇಕು, ಕಾದುವರೆ ಮನವಿಲ್ಲ- ಆಗಳೆ ಹೋಯಿತ್ತು ಬಿರುದು: ಹಗರಣ ನಗೆಗೆಡೆಯಾಯಿತ್ತು! ಮಾರಂಕ ಜಂಗಮ ಮನೆಗೆ ಬಂದರೆ ಕಾಣದಂತಡ್ಡ ಮುಸುಡಿಟ್ಟಡೆ ಕೂಡಲಸಂಗಮದೇವ, ಜಾಣ, ಮೂಗ ಹಲುದೋರೆ ಕೊಯ್ವ!