ಬಸವಣ್ಣ   
  ವಚನ - 306     
 
ಎನ್ನ ಭಕ್ತನೆಂದೆಂಬರು: ಎನ್ನ ಹೊರಹಂಚೆ ಒಳಬೊಳ್ಳೆತನವನರಿಯರಾಗಿ! ಎನ್ನ ಮಾನಾಪಮಾನ ಶರಣರಲ್ಲಿ; ಜಾತಿ-ವಿಜಾತಿಯು ಶರಣರಲ್ಲಿ; ತನು-ಮನ-ಧನವೂ ಶರಣರಲ್ಲಿ. ವಂಚನೆಯುಳ್ಳ ಡಂಭಕ ನಾನು: ತಲೆಯೊಡೆಯಂಗೆ ಕಣ್ಣ ಬೈಚಿಡುವೆ, ಕೂಡಲಸಂಗಮದೇವಾ.