ಬಸವಣ್ಣ   
  ವಚನ - 307     
 
ನೋಡುವರುಳ್ಳರೆ ಮಾಡುವೆ ದೇಹಾರವ: ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿಯಿಲ್ಲ! ಲಿಂಗವ ತೋರೆ ಉದರವ ಹೊರೆವ ಭಂಗಗಾರ ನಾನು, ಕೂಡಲಸಂಗಮದೇವಾ!