ಬಸವಣ್ಣ   
  ವಚನ - 308     
 
ಭಕ್ತಿಯೆಳ್ಳನಿತಿಲ್ಲ: ಯುಕ್ತಿ ಶೂನ್ಯನಯ್ಯಾ ನಾನು: ತನುವಂಚಕ, ಮನವಂಚಕ, ಧನವಂಚಕ ನಾನಯ್ಯಾ. ಕೂಡಲಸಂಗಮದೇವಾ, ಒಳಲೊಟ್ಟೆಯೆನ್ನ ಮಾತು!