ಬಸವಣ್ಣ   
  ವಚನ - 309     
 
ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ: ಮತ್ತೆಯೂ ವಂಚನೆ ಮಾಣದಯ್ಯಾ. ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ: ಮತ್ತೆಯೂ ವಂಚನೆ ಮಾಣದಯ್ಯಾ. ಒಡಲೊಡವೆ ಹಡೆದರ್ಥ ನಿಮ್ಮದೆಂದರಿಯದೆ ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ!