ಬಸವಣ್ಣ   
  ವಚನ - 311     
 
ಅರ್ಥಪ್ರಾಣಾಭಿಮಾನ ನಿಮ್ಮದೆಂಬೆ: ಮತ್ತೆಯೂ ಆಸೆ ಬಿಡದನ್ನಕ್ಕ ಭಕ್ತನೆಂತಪ್ಪೆನಯ್ಯಾ? ಶರಣನೆಂತೆನಿಸುವೆನಯ್ಯಾ, ಆನು ಲಿಂಗೈಕ್ಯನೆಂತೆನಿಸುವೆನಯ್ಯಾ? ಕೂಡಲಸಂಗನ ಶರಣರ ಸಕಲರತಿಗೆ ಸಲ್ಲದನ್ನಕ್ಕ?