ಬಸವಣ್ಣ   
  ವಚನ - 315     
 
ಒಲುವ ಗಂಡನೊಮ್ಮೆ ಒಲ್ಲದಿಪ್ಪ, ಕಂಡಯ್ಯಾ! ತಪ್ಪೆನ್ನದು, ತಪ್ಪೆನ್ನದು! ತನು-ಮನ-ಧನದಲ್ಲಿ ಮಾಟ-ಕೂಟವೆಂದರಿಯದ ತಪ್ಪೆನ್ನದು, ತಪ್ಪೆನ್ನದು! ಕಡೆಯಿಯಿಲ್ಲದ ಹುಸಿ ಎನ್ನದು! ಕೂಡಲಸಂಗಮದೇವಾ.