ಬಸವಣ್ಣ   
  ವಚನ - 336     
 
ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ, ಕಾಟುಗ, ಕೆತ್ತುಗ, ಪೋಲುಗನೆಂಬುದು ಎನ್ನ ಹೆಸರು! ಕೂಡಲಸಂಗಮದೇವಾ, ನಿಮ್ಮ ಶರಣರ ಮನೆಯ ಮಗ ನಾನಯ್ಯಾ.