ಬಸವಣ್ಣ   
  ವಚನ - 385     
 
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವ ಹಮ್ಮಿನಲ್ಲಿ ಬೆಂದೆನಯ್ಯಾ. ಲಿಂಗವೆಂದರಿಯೆ, ಜಂಗಮವೆಂದರಿಯೆ, ಪ್ರಸಾದವೆಂದರಿಯೆ! ಆನು ಬೆಂದೆನಯ್ಯಾ. ಕೂಡಲಸಂಗಮದೇವಾ: ಆನು ಮಾಡುವುದೆಲ್ಲಾ ಉಪಚಾರವಯ್ಯಾ.