ಬಸವಣ್ಣ   
  ವಚನ - 393     
 
ಲಿಂಗದರುಶನ ಕರಮುಟ್ಟಿ, ಜಂಗಮದರುಶನ ಶಿರಮುಟ್ಟಿ, ಆವುದು ಘನವೆಂಬೆ, ಆವುದು ಕಿರಿದೆಂಬೆ? ತಾಳಸಂಪುಟಕ್ಕೆ ಬಾರದ ಘನವ ಅರ್ಪಿಸ ಹೋದರೆ, ಅರ್ಪಣ ಮುನ್ನವೆ ಇಲ್ಲ: ಗಮನ ನಿರ್ಗಮನವಾಯಿತ್ತು! ಈ ಉಭಯ ಭೇದವನರಿಯರಾಗಿ, ಜಂಗಮವೆ ಲಿಂಗ ಕೂಡಲಸಂಗಮದೇವಾ.