ಬಸವಣ್ಣ   
  ವಚನ - 401     
 
ಉತ್ತಮ, ಮಧ್ಯಮ, ಕನಿಷ್ಟವೆಂದು ಬಂದ ಜಂಗಮವನೆಂದೆನಾದರೆ ನೊಂದೆನಯ್ಯಾ, ಬೆಂದೆನಯ್ಯಾ, ಎನ್ನ ಕಿಚ್ಚು ಎನ್ನ ಸುಟ್ಟಿತ್ತು! ಸು(ಖಿ)ಜಂಗಮ, ಸಾಮಾನ್ಯ ಜಂಗಮವೆಂದುಂಟೆ, ಕೂಡಲಸಂಗಮದೇವಾ?