ಬಸವಣ್ಣ   
  ವಚನ - 405     
 
ಕೆಂಡದಲ್ಲಿಟ್ಟಡೆ ಮೆಯ್ ಬೆಂದುದೆಂಬರು: ಕೊಂಡಿಟ್ಟವನ ಕೈ ಮುನ್ನವೇ ಬೆಂದುದು! ನೊಂದೆನಾನು ನೊಂದೆನಯ್ಯಾ, ಬೆಂದೆನಾನು ಬೆಂದೆನಯ್ಯಾ! ಕೂಡಲಸಂಗನ ಶರಣರ ಕಂಡು ಕಾಣದಂತಿದ್ದರೆ ನಾನಂದೇ ಬೆಂದೆನಯ್ಯಾ!