ಬಸವಣ್ಣ   
  ವಚನ - 415     
 
ದೂರದಿಂದ ಬಂದ ಜಂಗಮವನಯ್ಯಗಳೆಂದು, ಸಾರಿದ್ದ ಜಂಗಮವ ಪರಿಚಾರಕರೆಂಬ ಕೇಡಿಂಗೆ ಬೆರಗಾದೆನಯ್ಯಾ; ಸಾರಿದ್ದರವರ, ದೂರದವರೆಂದು ಬೇರೆ ಮಾಡಿದರೆ ಕೂಡಲಸಂಗಮದೇವ ಸಿಂಗಾರದ ಮೂಗ ಹಲುದೋರೆ ಕೊಯ್ಯದೆ ಮಾಣ್ಬನೆ?