ಬಸವಣ್ಣ   
  ವಚನ - 416     
 
ಹಿಡಿವೆಡೆಯನೆ ಕಾಸಿ, ಹಿಡಿವ ಕೈ ಬೆಂದು, ಮಿಡುಮಿಡನೆ ಮಿಡುಕುವ, ಮರುಳ ಮಾನವನೇ ಬಡವರೆಂದೆನಬೇಡಾ ಲಾಂಛನಧಾರಿಯನು; ಕಡುಸ್ನೇಹದಿಂದವರ ಪೂಜೆಯ ಮಾಡುವುದು. ನಿಜವಡಗಿದ ರೂಪು, ನಿರ್ವಯಲ ಸ್ಥಾನ, ನಡೆಲಿಂಗ, ಜಂಗಮ: ಕೂಡಲಸಂಗಮದೇವ!