ಬಸವಣ್ಣ   
  ವಚನ - 427     
 
ಜಂಗಮವಿಲ್ಲದ ಮಾಟ, ಕಂಗಳಿಲ್ಲದ ನೋಟ! ಹಿಂಗಿತ್ತು ಶಿವಲೋಕ, ಇನ್ನೆಲ್ಲಿಯದಯ್ಯಾ? ಲಿಂಗಕ್ಕೆ ಮಾಡಿದ ಬೋನವ ಸಿಂಬಕ ತಿಂಬಂತೆ, ಸಮಯೋಚಿತವನರಿಯದೆ ಉದರವ ಹೊರೆವವರ ನರಕದಲ್ಲಿಕ್ಕದೆ ಮಾಣ್ಬನೆ ಕೂಡಲಸಂಗಮದೇವ?