ಬಸವಣ್ಣ   
  ವಚನ - 429     
 
ಜಂಗಮದ ಮನ-ಭಾವದಲ್ಲಿ ಭಕ್ತ(ನೆ) ಭೃತ್ಯನೆಂದು, ಭಕ್ತನ ಮನ-ಭಾವದಲ್ಲಿ ಜಂಗಮ(ವೆ) ಕರ್ತನೆಂದು ಇದ್ದ ಬಳಿಕ, ʼಬಂದುದು, ಬಾರದು, ಇದ್ದುದು, ಹೋಯಿತ್ತೆಂಬʼ ಸಂದೇಹವಿಲ್ಲದಿರಬೇಕು. ಹೋಯಿತ್ತೆಂಬ ಗುಣವುಳ್ಳನ್ನಕ್ಕ ನಿಮಗೆ ದೂರ, ನಿಮ್ಮವರಿಗೆ ಮುನ್ನವೆ ದೂರ! ಶಿವಾಚಾರಕ್ಕಲ್ಲಿಂದತ್ತ ದೂರ!! ಜಂಗಮದ ಗಳಗರ್ಜನೆ, ಜಂಗಮದ ಕೋಳಾಟಕೆ ಸೈರಿಸದಿದ್ದರೆ ನೀನಂದೇ ಮೂಗ ಕೊಯಿ, ಕೂಡಲಸಂಗಮದೇವಾ.