ಬಸವಣ್ಣ   
  ವಚನ - 430     
 
ನಯನದಾಹಾರವ ಜಂಗಮವ ನೋಡಿಸುವೆ, ಶ್ರೋತ್ರದಾಹಾರವ ಜಂಗಮವ ಕೇಳಿಸುವೆ, ಘ್ರಾಣದಾಹಾರವ ಜಂಗಮವ ವಾಸಿಸುವೆ, ಜಿಹ್ವೆಯಾಹಾರವ ಜಂಗಮವನೂಡಿಸುವೆ, (ತ್ವ)ಚದಾಹಾರವ ಜಂಗಮಕ್ಕೆ ಹೊದ್ದಿಸುವೆ; ಅಧಿಕ ಪ್ರೇಮ ಪ್ರಣಾಮವ ಮಾಡುವೆ- ಸಕಲ ಪದಾರ್ಥಂಗಳ ನೀಡುವೆನು, ಕೂಡಲಸಂಗಾ ನಿಮ್ಮ ಶರಣರಿಗೆ.